ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್ ಲಿ., ಅನ್ನು ೧೯೬೪ರಲ್ಲಿ “ಎಲ್ಲರಿಗಾಗಿ ಒಬ್ಬರು ಒಬ್ಬರಿಗಾಗಿ ಎಲ್ಲರೂ” ಎಂಬ ಸಹಕಾರಿ ಘೋಷ ವಾಕ್ಯದ ಮೂಲ ತತ್ವದ ಮೇಲೆ ಸ್ಥಾಪಿಸಲಾಯಿತು. ಇದು ಉಳಿತಾಯದ ಅಭ್ಯಾಸ ಹೊಂದಿರುವ ಕೆಳ ಮತ್ತು ಮಧ್ಯಮ ವರ್ಗದ ಜನರ ಬ್ಯಾಂಕಿಂಗ್ ಅಗತ್ಯಗಳನ್ನು ಪ್ರೋತ್ಸಾಹಿಸಲು ಮತ್ತು ಅರ್ಹ ಸದಸ್ಯರಿಗೆ ಹಣಕಾಸಿನ ನೆರವು ಸೌಲಭ್ಯಗಳನ್ನು ಒದಗಿಸಲು ಹಾಗೂ ಎಲ್ಲಾ ಸಮುದಾಯಗಳಿಗೆ ಮುಕ್ತವಾಗಿರುವ ಖಾಸಗಿ ಹಣ ಸಾಲಗಾರರ ಹಿಡಿತದಿಂದ ಅವರನ್ನು ಮುಕ್ತಗೊಳಿಸಲು ಸಹ ಆಗಿತ್ತು. ಪ್ರಸ್ತುತ ೨೫ ಕೋಟಿ ಸಾಲಗಳನ್ನು ನೀಡಿದ್ದು, ೬೫ ಕೋಟಿ ಠೇವಣಿಯನ್ನು ಸಂಗ್ರಹಿಸಿದ್ದು, ೧೨,೦೦೦ಕ್ಕೂ ಹೆಚ್ಚು ಖಾತೆದಾರರನ್ನು ಹೊಂದಿದೆ ಹಾಗೂ ಬೆಂಗಳೂರು ನಗರದಲ್ಲಿ ಒಟ್ಟು ಮೂರು ಶಾಖೆಗಳನ್ನು ಹೊಂದಿದೆ.
ಬೆಂಗಳೂರಿನ ವಿಶ್ವಾಸರ್ಹ ಪಟ್ಟಣ ಸಹಕಾರ ಬ್ಯಾಂಕ್ ಆದ ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್ ಲಿ., ಅನ್ನು ಪ್ರಸಿದ್ಧ ಗಾಂಧಿವಾದಿಗಳು, ಸ್ವಾತಂತ್ರ‍್ಯ ಹೋರಾಟಗಾರರು, ಪತ್ರಕರ್ತರು, ಸಮಾಜ ಸೇವಕರು ಮತ್ತು ಸಮಾಜದ ಮಹಾನ್ ಮಾನವತಾವಾದಿಗಳು ಆದ ಶ್ರೀ ಸಿದ್ದವನಹಳ್ಳಿ ಕೃಷ್ಣ ಶರ್ಮಾಜಿ ಹಾಗೂ ಇವರ ಅನುಯಾಯಿಗಳಾದ ಶ್ರೀ ಹೆಚ್.ಶ್ರೀನಿವಾಸಯ್ಯ, ಶ್ರೀ ಎಚ್.ಎಲ್.ನರಸಿಂಹಯ್ಯ, ಶ್ರೀ ಎಲ್.ವೆಂಕಟಪ್ಪ, ಶ್ರೀ ಟಿ.ಲಿಂಗಪ್ಪ, ಶ್ರೀ ಬಿ.ಮುನಿಯಪ್ಪ, ಶ್ರೀ ಎ.ವಿ.ವೀರಣ್ಣಯ್ಯ, ಶ್ರೀ ಬಿ.ಶಂಕರನ್, ಶ್ರೀ ಎಂ.ವಿ.ಕೃಷ್ಣಮೂರ್ತಿ, ಶ್ರೀ ಸಿ.ಶ್ರೀನಿವಾಸನ್, ಶ್ರೀ ಎಸ್.ಭೋಜರಾಜು, ಶ್ರೀ ಕೆ.ಬೈಲಪ್ಪ ಮತ್ತು ಶ್ರೀ ಎ.ಸತ್ಯನಾರಾಯಣ ಅವರಂತಹ ಇತರ ಸಹಕಾರಿಗಳು ಸಾರ್ವಜನಿಕರಲ್ಲಿ ಮಿತವ್ಯಯ ಮತ್ತು ಉಳಿತಾಯ ಅಭ್ಯಾಸವನ್ನು ಪ್ರೋತ್ಸಾಹಿಸುವ ಮತ್ತು ಖಾಸಗಿ ಹಣ ಸಾಲಗಾರರ ಹಿಡಿತದಿಂದ ಸದಸ್ಯರನ್ನು ಮುಕ್ತಗೊಳಿಸುವ ಪ್ರಮುಖ ಉದ್ದೇಶದೊಂದಿಗೆ ಸ್ಥಾಪಿಸಿದರು.
೫೨೭ ಸದಸ್ಯರೊಂದಿಗೆ ಪ್ರಾರಂಭವಾದ ಈ ಬ್ಯಾಂಕ್ ಪ್ರಾರಂಭ ವರ್ಷದಲ್ಲಿ ರೂ.೪೯,೭೫೬/- ಷೇರು ಬಂಡವಾಳವನ್ನು ಮತ್ತು ಇತರೆ ಠೇವಣಿಗಳನ್ನು ಸಂಗ್ರಹಿಸಿತು. ಬ್ಯಾಂಕ್ ಸ್ಥಾಪನೆಯಾದ ಮೊದಲ ವರ್ಷದಿಂದಲೇ ಲಾಭ ಗಳಿಸಿ ಸದಸ್ಯರ ಷೇರಿಗೆ ಲಾಭಾಂಶವನ್ನು ವಿತರಿಸಿತು. ಇಂದು ಬ್ಯಾಂಕಿನ ವ್ಯವಹಾರವು ರೂ.೯೦ ಕೋಟಿಗಳನ್ನು ದಾಟಿದೆ.
ಸಹಕಾರದ ಉತ್ತಮ ತತ್ವಗಳ ಮೇಲೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಮತ್ತು ೬೦ ವರ್ಷಗಳಿಗೂ ಹೆಚ್ಚು ಕಾಲ ಬ್ಯಾಂಕಿಂಗ್ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬ್ಯಾಂಕ್ ಪ್ರಾರಂಭವಾದ ದಿನಾಂಕದಿಂದ ನಿರಂತರವಾಗಿ ಲಾಭ ಗಳಿಸುತ್ತಿದೆ ಮತ್ತು ಸದಸ್ಯರಿಗೆ ಲಾಭಾಂಶವನ್ನು ವಿತರಿಸುತ್ತಿದೆ. ಬ್ಯಾಂಕ್ ‘ಎ’ ಶ್ರೇಣಿ ಆಡಿಟ್ ವರ್ಗೀಕರಣಕ್ಕೆ ಸೇರಿರುತ್ತದೆ. ಆಡಳಿತ ಮಂಡಲಿಯಲ್ಲಿರುವ ನಿರ್ದೇಶಕರ ದೂರದೃಷ್ಟಿ ಮತ್ತು ಪಾರದರ್ಶಕತೆ ಮತ್ತು ಸಮರ್ಪಿತ ಪ್ರತಿಭಾನ್ವಿತ ಸಿಬ್ಬಂದಿ ಈ ಸಾಧನೆಗೆ ಕಾರಣಕರ್ತರಾಗಿರುತ್ತಾರೆ.
ಬ್ಯಾಂಕ್ ೨೦೧೫ರಲ್ಲಿ ಸುವರ್ಣ ಮಹೋತ್ಸವವನ್ನು ಮತ್ತು ೨೦೨೪ರಲ್ಲಿ ವಜ್ರ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿರುತ್ತದೆ.