ಬೆಂಗಳೂರಿನ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದಾದ ಈ ನಮ್ಮ ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್ ಲಿ.,ನ ಗೌರವಾನ್ವಿತ ಸದಸ್ಯರುಗಳಿಗೆ ಹಾಗೂ ಗ್ರಾಹಕರುಗಳಿಗೆ ನೀಡುತ್ತಿರುವ ಸೇವಾ ಸೌಲಭ್ಯಗಳ ಮಾಹಿತಿಯನ್ನು ಪ್ರಚುರಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾದ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಆದ ನಾನು ಬ್ಯಾಂಕಿನ ಎಲ್ಲಾ ಗೌರವಾನ್ವಿತ ಸದಸ್ಯರು ಹಾಗೂ ಗ್ರಾಹಕರುಗಳಿಗೆ ಸಮಾಧಾನಕರ ಬ್ಯಾಂಕಿಂಗ್ ಸೇವೆಯನ್ನು ನೀಡಲು ಬದ್ಧನಾಗಿದ್ದೇನೆಂದು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ನಾನು ಮತ್ತು ನನ್ನ ಸಹದ್ಯೋಗಿಗಳು ಬ್ಯಾಂಕಿನ ಕಾರ್ಯಕ್ಷಮತೆಯೊಂದಿಗೆ ಸ್ವರ್ಧಿಸಲು ಪ್ರಯತ್ನಿಸುತ್ತೇವೆ ಮತ್ತು ನಮ್ಮ ಸೇವೆಗಳು, ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ನಿರಂತರವಾಗಿ ಉನ್ನತೀಕರಿಸಲು ಪ್ರಯತ್ನಿಸುತ್ತೇವೆ ಹಾಗೂ ನಮ್ಮ ಗೌರವಾನ್ವಿತ ಸದಸ್ಯರು ಮತ್ತು ಗ್ರಾಹಕರುಗಳಿಂದ ಬ್ಯಾಂಕಿನ ಪುರೋಭಿವೃದ್ಧಿಗಾಗಿ ಬರುವ ಯಾವುದೇ ಸಲಹೆಗಳನ್ನು ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಆದ್ದರಿಂದ ತಾವು ನಮ್ಮ ಬ್ಯಾಂಕಿನ ಬಗ್ಗೆ ಏನಾದರೂ ಸಲಹೆ ನೀಡಲು ಬಯಸಿದರೆ ದಯವಿಟ್ಟು ಯಾವುದೇ ಹಿಂಜರಿಕೆಯಿಲ್ಲದೆ ನೀಡಬಹುದಾಗಿರುತ್ತದೆ. ನಾವು ನಮ್ಮ ಅಂತರ್‌ಜಾಲವನ್ನು ಮಾತ್ರವಲ್ಲದೇ ನಮ್ಮ ಸೇವೆಗಳ ಶ್ರೇಣಿಯನ್ನು ಸಹ ನಿರಂತರವಾಗಿ ವಿಸ್ತರಿಸುತ್ತಿದ್ದೇವೆ. ನಿಮ್ಮ ಮನೆ/ಕಛೇರಿಯಲ್ಲಿ ಕುಳಿತುಕೊಂಡು ಬ್ಯಾಂಕಿನ ವ್ಯವಹಾರ ಮಾಡಲು ಆಧುನಿಕ ಡಿಜಿಟಲ್ ಸೇವೆಯನ್ನು ಆದಷ್ಟು ಶೀಘ್ರ ನೀಡಲು ಕ್ರಮವಹಿಸುತ್ತಿದ್ದು, ಈ ವ್ಯವಸ್ಥೆ ಜಾರಿಯಾದಾಗ ಸದರಿ ಮಾಹಿತಿಯನ್ನು ತಮಗೆ ಕೂಡಲೇ ತಿಳಿಸಲು ದಯವಿಟ್ಟು ನಿಮ್ಮ ಇ-ಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿಗೆ ನೀಡಲು ಕೋರಲಾಗಿದೆ.
ಬ್ಯಾಂಕಿನ ಉತ್ತಮ ಆರ್ಥಿಕ ಸ್ಥಿತಿ ಹಾಗೂ ನಿಷ್ಟೆಯಿಂದ ಸೇವೆಯನ್ನು ನೀಡಲು ಸದಾ ಸಿದ್ಧವಿರುವ,
ತಮ್ಮ ನಂಬುಗೆಯ
(ಶಿವಶಂಕರ.ಆರ್)
ಪ್ರಧಾನ ವ್ಯವಸ್ಥಾಪಕ